ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕರ್ನಾಟಕ ಸರ್ಕಾರವು ಕೌಶಲ್ಯ ಪ್ರಮಾಣೀಕರಣ ಮತ್ತು ಗುಣಮಟ್ಟ ಕಾರ್ಯದಲ್ಲಿ ಕೇಂದ್ರೀಕೃತ ಪಾತ್ರವನ್ನು ನಿರ್ವಹಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿರುತ್ತದೆ. ಕೌಶಲ್ಯ ತರಬೇತಿಯಲ್ಲಿ ಗುಣಮಟ್ಟದ ಮಾನದಂಡಗಳನ್ನು ಸ್ಥಾಪಿಸುವ ಜವಾಬ್ದಾರಿ ಪ್ರಾಧಿಕಾರ ಹೊಂದಿರುತ್ತದೆ. ಕೌಶಲ್ಯ ತರಬೇತಿಗಾಗಿ ಪಠ್ಯಕ್ರಮ ಕೋರ್ಸ್‍ವಿಷಯ ಮತ್ತು ಕ್ರೆಡಿಟ್ ಚೌಕಟ್ಟುಗಳ ಮಾನದಂಡಗಳನ್ನು ತಯಾರಿಸುವ ಜವಾಬ್ದಾರಿಯನ್ನು ಪ್ರಾಧಿಕಾರವು ಹೊಂದಿರುತ್ತದೆ. ತರಬೇತಿದಾರರಿಗೆ ತರಬೇತಿ ನೀಡುವ ವಿಷಯದಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ಪ್ರಾಧಿಕಾರವು ತಯಾರಿಸುವುದು. ರಾಜ್ಯ ಕೌಶಲ್ಯ ತರಬೇತಿ ಮತ್ತು ಕೌಶಲ್ಯ ಕಾರ್ಯಕ್ರಮಗಳ ಗುಣಮಟ್ಟವನ್ನು ಸುಧಾರಿಸಲು ಮಾನದಂಡಗಳನ್ನು ಪ್ರಾಧಿಕಾರವು ತಯಾರಿಸಲಾಗುವುದು. ಜಾಗತಿಕ ಮಾನದಂಡಗಳು ಮತ್ತು ಉತ್ತಮ ಅಭ್ಯಾಸಗಳನ್ನಾಧರಿಸಿ ಕಾರ್ಮಿಕ ಮಾರುಕಟ್ಟೆ ಮಾಹಿತಿ ವ್ಯವಸ್ಥೆಗಳು ಮತ್ತು ದತ್ತಾಂಶ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ಜವಾಬ್ದಾರಿಯು ಪ್ರಾಧಿಕಾರಕ್ಕೆ ವಹಿಸಲಾಗಿದೆ. ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಂಶೋಧನೆಗಳ ಒಳಹರಿವಿಗಾಗಿ ವಿಚಾರವೇದಿಕೆಯಾಗಿಯೂ ಪ್ರಾಧಿಕಾರವು ಕಾರ್ಯನಿರ್ವಹಿಸಲಿದೆ. ರಾಜ್ಯಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿಯೂ ಕೌಶಲ್ಯ ಭರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಹಾಗೂ ಕೌಶಲ್ಯ ಕ್ಷೇತ್ರದಲ್ಲಿ ಈಗಿರುವ ಬೇಡಿಕೆ ಹಾಗೂ ಪೂರೈಕೆಗಳ ಮಧ್ಯ ಇರುವ ಅಂತರವನ್ನು ಕಡಿಮೆಗೊಳಿಸಲು ಪ್ರಾಧಿಕಾರವು ಶ್ರಮಿಸುತ್ತದೆ.