ಕರ್ನಾಟಕ ಪ್ರವಾಸೋದ್ಯಮವನ್ನು ಆಚರಿಸಲು ಬ್ಲಾಗ್ ಬರೆಯುವ ಸ್ಪರ್ಧೆ
ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕದ ಪ್ರವಾಸೋದ್ಯಮವನ್ನು ...
ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕದ ಪ್ರವಾಸೋದ್ಯಮವನ್ನು ಸಂಭ್ರಮಿಸಲು ಬ್ಲಾಗ್ ಬರವಣಿಗೆ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಕರ್ನಾಟಕದ ಶ್ರೀಮಂತ ಪ್ರವಾಸೋದ್ಯಮ ಸಂಸ್ಕೃತಿಯ ಅರಿವನ್ನು ಮೂಡಿಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ.
ಕರ್ನಾಟಕದ ಟ್ಯಾಗ್ಲೈನ್ “ಒಂದು ರಾಜ್ಯ ಹಲವು ಜಗತ್ತುಗಳು” ಸೂಕ್ತವಾಗಿ ಸೂಚಿಸುವಂತೆ, ಕರ್ನಾಟಕವು ವಿವಿಧ ಸಂಸ್ಕೃತಿಗಳು, ಭಾಷೆಗಳು, ನಂಬಿಕೆಗಳು, ಪಾಕಪದ್ಧತಿಗಳು, ಕಲಾ ಪ್ರಕಾರಗಳು, ಮತ್ತು ರಾಜ್ಯದ ಉದ್ದಗಲಕ್ಕೂ ಹರಡಿರುವ ಅನೇಕ ವೈವಿಧ್ಯಗಳ ನಾಡಾಗಿದೆ. ಕರ್ನಾಟಕದ ಉದಯೋನ್ಮುಖ ಬರಹಗಾರರ ಸೃಜನಶೀಲತೆಯನ್ನು ಅನ್ವೇಷಿಸಲು, ಇಲಾಖೆಯು ಈ ಸ್ಪರ್ಧೆಯನ್ನು ಘೋಷಿಸಲು ಸಂತೋಷ ವ್ಯಕ್ತಪಡಿಸುತ್ತದೆ. ಹಾಗೆಯೇ ಕರ್ನಾಟಕದ ಸೊಬಗನ್ನು ಬ್ಲಾಗ್ ಬರೆಯುವುದರ ಮೂಲಕ ತಮ್ಮ ಪದಗಳಲ್ಲಿ ವರ್ಣಿಸಲು ಕೋರಿದೆ.
ಸಂವಹಿಸಿ, ರಚಿಸಿ ಮತ್ತು ಸೆರೆಹಿಡಿಯಿರಿ!
ವಿಜೇತ ಬ್ಲಾಗ್ ಗಳನ್ನು ನಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು MyGov ಜಾಲತಾಣದ ಬ್ಲಾಗ್ನಲ್ಲಿ ಪ್ರಕಟಿಸಲಾಗುತ್ತದೆ.
ಭಾಗವಹಿಸುವವರು ಯಾವುದೇ ಹೆಚ್ಚಿನ ಪ್ರಶ್ನೆಗಳಿದ್ದಲ್ಲಿ tourismkarnatakapublicity@gmail.com ಅನ್ನು ಸಂರ್ಕಿಸಲು ವಿನಂತಿಸಲಾಗಿದೆ.
ನಿಯಮ ಮತ್ತು ಷರತ್ತುಗಳು
ನಮೂದುಗಳ ಸಲ್ಲಿಕೆ:
•ಎಲ್ಲಾ ನಮೂದುಗಳನ್ನು ನಮ್ಮ ಅಧಿಕೃತ ಜಾಲತಾಣ ಮೂಲಕ ಆನ್ಲೈನ್ನಲ್ಲಿ ಸಲ್ಲಿಸಬೇಕು
* ಬ್ಲಾಗ್ ಗಳು ಕನ್ನಡ ಅಥವಾ ಇಂಗ್ಲಿಷ್ನಲ್ಲಿರಬಹುದು
•ಬೇರಾವ ಮಾಧ್ಯಮದಲ್ಲಿ ಸಲ್ಲಿಸಿದರು ಸ್ವೀಕರಿಸಲಾಗುವುದಿಲ್ಲ
* ಬ್ಲಾಗ್ ಸ್ಪರ್ಧೆಯಲ್ಲಿ ಎಲ್ಲಾ ವಯಸ್ಸಿನ ವರ್ಗದವರು ಭಾಗವಹಿಸಬಹುದು.
* ಪ್ರಬಂಧದ ಪದಗಳ ಮಿತಿಗಳು- ಪ್ರಬಂಧವು 1000* ಪದಗಳ ಮಿತಿಯೊಳಗೆ ಇರಬೇಕು.
*ಪ್ರಬಂಧವು ಪದದ ಮಿತಿಯನ್ನು ಮೀರಬಾರದು. ಇದು ಅನರ್ಹತೆಗೆ ಕಾರಣವಾಗುತ್ತದೆ.
•ಭಾಗವಹಿಸುವವರು ತಮ್ಮ ಸಲ್ಲಿಕೆಯೊಂದಿಗೆ ಈ ಕೆಳಗಿನ ವಿವರಗಳನ್ನು ನಮೂದಿಸಬೇಕು:
1. ಹೆಸರು
2. ವಿಳಾಸ
3. ವಯಸ್ಸು
4. ಸಂಪರ್ಕ ಸಂಖ್ಯೆ
5. ಇಮೇಲ್ ಐಡಿ
*ಅಪೂರ್ಣ ಪ್ರೊಫೈಲ್ಗಳು/ಅನಗತ್ಯವಿರುವ ವಿವರಗಳನ್ನು ಹೊಂದಿರುವ ನಮೂದುಗಳನ್ನು ಪರಿಗಣಿಸಲಾಗುವುದಿಲ್ಲ.