You don't have javascript enabled. Please Enabled javascript for better performance.

“ಎಲ್ಲೆಲ್ಲೂ ಸಂಗೀತವೇʼ - ಸಂಗೀತ ಸ್ಪರ್ಧೆ

Start Date: 16-06-2022
End Date: 30-06-2022

ವಿಶ್ವ ಸಂಗೀತ ದಿನವನ್ನು ಪ್ರತೀ ವರ್ಷ ಜೂನ್‌ 21ರಂದು ಸಂಗೀತ ರಚನಾಕಾರರು ಮತ್ತು ...

See details Hide details

ವಿಶ್ವ ಸಂಗೀತ ದಿನವನ್ನು ಪ್ರತೀ ವರ್ಷ ಜೂನ್‌ 21ರಂದು ಸಂಗೀತ ರಚನಾಕಾರರು ಮತ್ತು ಗಾಯಕರಿಗೆ ಗೌರವವನ್ನು ಅರ್ಪಿಸಲು ಆಚರಿಸಲಾಗುತ್ತದೆ. ಪ್ರತಿಯೊಂದು ರೀತಿಯ ಸಂಗೀತವು ತನ್ನದೇ ಆದ ಶೈಲಿಯನ್ನು ಹೊಂದಿದೆ. ಹೀಗಾಗಿ ವಿಶ್ವ ಸಂಗೀತ ದಿನದ ಅಂಗವಾಗಿ ವಿವಿಧ ಸಂಗೀತ ಸ್ವರಗಳನ್ನು ಹೊರತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಸ್ಪರ್ಧೆಯನ್ನು ಆಯೋಜಿಸಲು ಸಂತಸ ವ್ಯಕ್ತಪಡಿಸುತ್ತದೆ.

ಸಂಗೀತ ಉತ್ಸುಕರಿಗೆ ತಮ್ಮ ಹಾಡಿನ ಚಾತುರ್ಯವನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಿದೆ. ಹಾಡಿನ ಕಾಲವಧಿಯು 5 ನಿಮಿಷಕ್ಕೆ ಮೀರದಂತೆ ಶಾಸ್ತ್ರೀಯ ಸಂಗೀತ (ಕರ್ನಾಟಕ ಸಂಗೀತ ಹಾಗೂ ಹಿಂದೂಸ್ಥಾನಿ ಸಂಗೀತ) ದೇವರನಾಮ, ಸುಗಮ ಸಂಗೀತ /ಭಕ್ತಿ ಸಂಗೀತ ಗಮಕ/ ವಾಚನ ಹಾಗೂ ವಾದ್ಯ ಸಂಗೀತ (ತಾಳವಾದ್ಯವೂ ಸೇರಿದಂತೆ) ಆಯ್ಕೆಯು ನಿಮ್ಮಿಚ್ಛೆಯದಾಗಿರುತ್ತದೆ.

ಬಹುಮಾನಗಳ ವಿವರ: ವಿಜೇತರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಕರ್ನಾಟಕ ಸಂಗೀತ ನೃತ್ಯಅಕಾಡೆಮಿಯ ಪ್ರಕಟಿತ ಪುಸ್ತಕಗಳನ್ನು ಬಹುಮಾನವಾಗಿ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು.

ಕೊನೆಯ ಸಲ್ಲಿಕೆ ದಿನಾಂಕ : 30th June 2022

ಯಾವುದೇ ಪ್ರಶ್ನೆಗಳಿದ್ದಲ್ಲಿ ಸಂಪರ್ಕಿಸಿ [karnatakasangeeta[at]gmail[dot]com]

ನಿಯಮಗಳು ಮತ್ತು ಷರತ್ತುಗಳು:
(ವಯೋಮಾನ - 16ರವರೆಗೆ ಒಂದು ವಿಭಾಗ ಹಾಗೂ 16ರ ಮೇಲ್ಪಟ್ಟು 40ರವರೆಗೆ ಮತ್ತು 40ರ ಮೆಲ್ಪಟ್ಟಂತೆ ವಿಭಾಗಗಳನ್ನು ಹೊಂದಿರುತ್ತದೆ)

1) ಐದು ನಿಮಿಷಕ್ಕೆ ಮೀರದಂತೆ ಹಾಡಿ ಚಿತ್ರೀಕರಣ ಮಾಡಿಕೊಂಡದ್ದನ್ನು ಗೂಗಲ್ ಶೀಟ್ / ಗೂಗಲ್ ಫಾರ್ಮ್ನಲ್ಲಿ ಅಳವಡಿಸುವುದು.

https://docs.google.com/forms/d/e/1FAIpQLScKAQjBuDdvniC0JCL0HfYZ883zXfB7...


2) ಪ್ರತಿ ವಿಭಾಗದಲ್ಲಿ 5ಕ್ಕಿಂತ ಹೆಚ್ಚು ಪ್ರವೇಶಾತಿಗಳು/ಅಭ್ಯರ್ಥಿಗಳು ಭಾಗವಹಿಸಿದ್ದಲ್ಲಿ ಪ್ರಥಮ, ದ್ವಿತೀಯಾ ಹಾಗೂ ತೃತೀಯ ಬಹುಮಾನಕ್ಕೆ ಪರಿಗಣಿಸಲಾಗುವುದು.
3) ಸ್ಪರ್ಧಿಸಲು ಜೂನ್ 21 ಕೊನೆಯ ದಿನಾಂಕವಾಗಿರುತ್ತದೆ ಜೂನ್ 30ರಂದು ಫಲಿತಾಂಶವನ್ನು ಪ್ರಕಟಿಸಲಾಗುವುದು.
4)ವಿಡಿಯೋಗಳನ್ನು MP4 ಸ್ವರೂಪದಲ್ಲಿ ಅಪ್‌ಲೋಡ್‌ ಮಾಡತಕ್ಕದ್ದು.
5) ವೀಡಿಯೊ ಲಿಂಕ್ (youtube ಅಥವಾ drive) ಅನ್ನು ಗೂಗಲ್ ಫಾರ್ಮ್ ನಲ್ಲಿ ಅಪ್‌ಲೋಡ್ ಮಾಡಬೇಕು)

All Comments
ಸಲ್ಲಿಕೆಗಳನ್ನು ( 7) Approved Submissions (0) Submissions Under Review (7) ಮುಚ್ಚಿದ